SSF ಡಿಜಿ ಕಟ್ಟೆ ಶಾಖೆ:- ಮದರಸ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ
ಮದರಸ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಕೈರಂಗಳ :- SSF ಡಿ.ಜಿ ಕಟ್ಟೆ ಕೈರಂಗಳ ಶಾಖೆ ಮತ್ತು ಅಲ್ ಅಮೀನ್ ಫ್ರೆಂಡ್ಸ್ ಕೈರಂಗಳ ಇದರ ಜಂಟಿ ಆಶ್ರಯದಲ್ಲಿ ದಾರುಸ್ಸಲಾಂ ಮದರಸ ವಿದ್ಯಾರ್ಥಿಗಳಿಗೆ ದಿನಾಂಕ 16/06/2019ರಂದು ಸಮವಸ್ತ್ರ ವಿತರಣೆಯನ್ನು ಮಾಡಲಾಯಿತು.ಜಮಾಅತ್ ಉಪಾಧ್ಯಕ್ಷರಾದ ಇಬ್ರಾಹಿಂ ಪಾರೆ ಅಧ್ಯಕ್ಷತೆ ವಹಿಸಿದರು.ತೋಟಾಲ್ ಮಸ್ಜಿದ್ ಖತೀಬ್ ರಾದ ಮುಹಿಯದ್ದೀನ್ ಸಅದಿ ತೋಟಾಲ್ ಉಸ್ತಾದ್ ಪತಹೇ ಮುಬಾರಕ್ ಉದ್ಘಾಟನೆ ಮಾಡಿದರು. SSF ಶಾಖಾಧ್ಯಕ್ಷ ಜಾಬಿರ್ ತೋಟಾಲ್ ಮತ್ತು ಅಲ್ ಅಮೀನ್ ಅಧ್ಯಕ್ಷರಾದ ಹಂಝ ವಿದ್ಯಾನಗರ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು. ವೇದಿಕೆಯಲ್ಲಿ ಮುಅಝ್ಝಿನ್ ಹಮೀದ್ ಉಸ್ತಾದ್ ಮೂಸಕುಂಞಿ ಹಾಜಿ ಪಾರೆ,NS ಉಮ್ಮರ್ ಸಿದ್ದೀಕ್ ಹಾಜಿ,ಮುಹಮ್ಮದ್ ತೋಟಾಲ್, ಶರೀಫ್ NS ಹಾಗೂ ಮತ್ತಿತರ ಸಂಘಟನಾ ನಾಯಕರು,ಜಮಾಅತ್ ಸದಸ್ಯರು ಬಾಗವಹಿಸಿದ್ದರು. ತೋಟಾಲ್ ಜಮಾಅತ್ ಕಾರ್ಯದರ್ಶಿ ಖಲೀಲ್ ವಿದ್ಯಾನಗರ ಸ್ವಾಗತಿಸಿ ವಂದಿಸಿದರು.