ಎಸ್ಸೆಸ್ಸೆಫ್ ಡಿ.ಜಿ ಕಟ್ಟೆ ಕೈರಂಗಳ ಶಾಖೆ - ಅರ್ಧವಾರ್ಷಿಕ ಮಹಾಸಭೆ ಕೈರಂಗಳ :- ಎಸ್ಸೆಸ್ಸೆಫ್ ಡಿ. ಜಿ ಕಟ್ಟೆ ಕೈರಂಗಳ ಶಾಖೆಯ ಅರ್ಧವಾರ್ಷಿಕ ಮಹಾಸಭೆಯು ದಿನಾಂಕ 07-07-2019 ಆದಿತ್ಯವಾರ ಸಮಯ ಸರಿಯಾಗಿ 8:00 pm ಶಾಖೆಯ ಅಧ್ಯಕ್ಷರು ರಾದ ಮಹಮ್ಮದ್ ಜಾಬೀರ್ ರವರ ಅಧ್ಯಕ್ಷತೆಯಲ್ಲಿ ಶಾಖಾ ಕಛೇರಿಯಲ್ಲಿ ನಡೆಯಿತು. ಮೊಂಟುಗೋಳಿ ಸೆಕ್ಟರ್ ನಿಂದ ವೀಕ್ಷಕರಾಗಿ ಅಗಮನಿಸಿದ ಇಲ್ಯಾಸ್ ಪೊಟ್ಟೊಳಿಕೆ ಸಭೆ ನಡೆಸಿಕೊಟ್ಟರು, ಶಾಖಾ ಉಸ್ತುವಾರಿ ಮುದಸ್ವಿರ್ ಮೊಂಟೆಪದವು ಸಭೆಯನ್ನು ಉದ್ಘಾಟಿಸಿದರು. ಪ್ರ.ಕಾರ್ಯದರ್ಶಿ ಮಹಮ್ಮದ್ ಅಸೀರ್ ಜಿ. ಎಮ್ ರವರ ವರದಿ ಮಂಡಿಸಿದರು, ಕೋಶಾದಿಕಾರಿ ಅಬ್ದುಲ್ ರಹಿಮಾನ್ ಎಸ್ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ಶಾಖಾ ನಾಯಕರು ಉಪಸ್ಥಿತಿದ್ದರು ಮಹಮ್ಮದ್ ಅಸೀರ್ ಜಿ. ಎಮ್ ಸ್ವಾಗತಿಸಿದರು. ಸಿನಾನ್ ಸುಟ್ಟ ವಂದಿಸಿದರು .
Posts
Showing posts from August, 2019
ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ:- ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಮಜ್ಲಿಸ್
- Get link
- X
- Other Apps
ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ:- ಮಾಸಿಕ ಮಹ್ಳರತುಲ್ ಬದ್ರಿಯಾಃ ಮತ್ತು ನಾರಿಯತ್ ಮಜ್ಲಿಸ್ ಕೈರಂಗಳ :- ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ ಹಾಗೂ ಇಂಡಿಯಾ ಗ್ರಾಂಡ್ ಮುಪ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ದರ ಇಜಾಝತ್ ಪ್ರಕಾರ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಮಹ್ಳರತುಲ್ ಬದ್ರಿಯಾಃ ಹಾಗೂ ನಾರಿಯತ್ ಸ್ವಲಾತ್ ಮಜ್ಲಿಸ್ ವು ಶಾಖೆಯ ಅಧ್ಯಕ್ಷ ರಾದ ಮಹಮ್ಮದ್ ಜಾಬೀರ್ ತೋಟಾಲ್ ಇವರ ಅಧ್ಯಕ್ಷತೆಯಲ್ಲಿ ಶಾಖೆಯ ಕೆ.ಸಿ.ಎಫ್ ಸದಸ್ಯರಗಳಾದ ಇಸ್ಮಾಯಿಲ್ ಸುಟ್ಟ ಹಾಗೂ ಅಬ್ದುಲ್ ರಹಿಮಾನ್ (ಅಸೀಫ್) ಸುಟ್ಟ ಇವರ ಮನೆಯಲ್ಲಿ 28-07-19 ಆದಿತ್ಯವಾರ ಇಶಾ ನಮಾಜಿನ ಬಳಿಕ ನಡೆಯಿತು. ನಮ್ಮ ಮಾರ್ಗದರ್ಶನಕರು , SJM ಮಂಗಳೂರು ಜಿಲ್ಲಾ ಉಪಾಧ್ಯಕ್ಷರು, M.J.M ತೋಟಾಲ್ ಇದರ ಖತೀಬರು ರಾದ ಶೈಖುನಾ ಅಲ್ ಹಾಜ್ ಮುಹಿಯುದ್ದೀನ್ ಸಹದಿ ತೋಟಾಲ್ ಮಜ್ಲಿಸ್ ಗೆ ನೇತೃತ್ವ ನೀಡಿದರು. ವೇದಿಕೆಯಲ್ಲಿ :- ಹಮೀದ್ ಮುಸ್ಲಿಯಾರ್, ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಎಸ್ , ಉಪಾಧ್ಯಕ್ಷ ಅಬ್ಬಾಸ್ ವಿದ್ಯಾನಗರ , ರಝಾಕ್ ಸುಟ್ಟ ಪದಾಧಿಕಾರಿಗಳು ಮುಂತಾದವರು ಉಪಸ್ಥಿತಿದ್ದರು. ➖➖➖➖➖➖➖➖➖➖➖ ಪ್ರಕಟನೆ:- 👉🏻 ಮಹಮ್ಮದ್ ಸಿನಾನ್ ಸುಟ್ಟ (ಕನ್ವೀನರ್ ಮೀಡಿಯಾ ಡಿಜಿ ಕಟ್ಟೆ ಶಾಖೆ)