ಸಿರಾಜ್ ನೀನೆಷ್ಟು ಬಾಗ್ಯವಂತ
ಸಿರಾಜ್ ನೀನೆಷ್ಟು ಬಾಗ್ಯವಂತ
ಸಹ ಕಾರ್ಯಕರ್ತ ಸಿರಾಜ್ ನೊಂದಿಗೆ ಕಾರ್ಯಚರಣೆ ಮಾಡಿದ ದಿನಗಳು , ಕ್ಯಾಂಪ್ ಗಳಲ್ಲಿ , ಕಾರ್ಯಕ್ರಮ ಗಳಲ್ಲಿ ಒಟ್ಟಾಗಿ ಜೊತೆಯಾಗಿ ಕೆಲಸ ಮಾಡಿದ ದಿನ ಗಳು ಕಣ್ಣ ಮುಂದೆ ಬರುತ್ತಿದೆ.
ನಿನ್ನೊಂದಿಗೆ ಮಾತಿಗೆ ಇಳಿದರೆ ಹೊರಡಲು ಮನಸ್ಸಿಲ್ಲ ....
ಯಾರೊಂದಿಗೆ ಕೋಪ ಜಗಳ ಇಲ್ಲ,ನಾವು ಎಷ್ಟೇ ಜಗಳಕ್ಕಿಳಿದರೂ ನಿನ್ನ ಮಂದಹಾಸದ ಮುಗುಳ್ನಗು ನಮ್ಮನ್ನು ಸೋಳಿಸುತ್ತಿತ್ತು......
ಸಿರಾಜ್ ನೀನು ನಿಜಕ್ಕೂ ಬಾಗ್ಯವಂತ .ನಿನಾಗಾಗಿ ದುಆ ಮಾಡಿದ ಆಲಿಮ್ ಎಷ್ಟು.ನಿನಗಾಗಿ ಎಷ್ಟು ಕುರ್ಆನ್ ಖತಂ ಗಳು,ದಿಕ್ರ್ ಗಳು ,ಯಾಸೀನ್ ಸೂರಃ ಗಳು , ಅನುಸ್ಮರಣೆ ಮಜ್ಲಿಸ್ಗಳು.ಯಾರನ್ನೂ ಅನಗತ್ಯವಾಗಿ ಹೊಗಳದ *ಶೈಖುನಾ ಪೆರೋಡ್ ಉಸ್ತಾದ್ ನಿನ್ನ ಬಗ್ಗೆ ಅದೆಷ್ಟು ಗುಣಗಾಣ ಮಾಡಿದರು.*
ಎಸ್ಸೆಸ್ಸೆಫ್ ಶಾಖಾ ಡಿವಿಷನ್, ಸೆಕ್ಟರ್ ಮಟ್ಟದಲ್ಲಿ ದಿಕ್ರ್ ಮಜ್ಲಿಸ್ ,ವಿದೇಶದಲ್ಲಿ ಕೆಸಿಎಪ್ ಗಳಿಂದ ಅಲ್ಲಿಯೂ ಕೂಡ ದ್ಸಿಕ್ರ್ ಮಜ್ಲಿಸ್.....
ಸಿರಾಜುದ್ದೀನ್ ಸಾಂತ್ವನ ರಿಲೀಫ್ ನೊಂದಿಗೆ ತಮ್ಮ ಹೆಸರು ರಾರಾಜಿಸುತ್ತಿದೆ ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಎಂಬ ನೀನು ಪ್ರೀತಿಸಿದ ಸಂಘಟನೆಯಲಿ.
ಎಲ್ಲಾ ಆಲಿಮ್ ಉಸ್ತಾದ್ ಗಳ ಬಾಯಿಯಲ್ಲಿ ಸಿರಾಜ್ ನಿನ್ನ ಜೀವನ ಚರಿತ್ರೆ.
ಎಸ್ಸೆಸ್ಸೆಫ್ ಕಾರ್ಯಕರ್ತ ರಿಗರ ನೀನೇ ನಿಜವಾದ ಮಾರ್ಗದರ್ಶಕ .
ಅಲ್ಲಾಹು ನಮಗೂ ನಿನ್ನ ದಾರಿಯಲ್ಲಿ ಜೀವಿಸಲು ತೌಫೀಕ್ ನೀಡು.....
ಸಿರಾಜ್ ನಂತಹರಣ ನಮಗೂ ದಯಪಾಲಿಸು'
ಅವನು ಕಲಿಸಿಕೊಟ್ಟ ಆ ರೀತಿಯಲ್ಲಿ ಪ್ರವರ್ತಿಸಲು ತೌಫೀಕ್ ನೀಡು ಅಲ್ಲಾಹ್.....
🖊. ಮಹಮ್ಮದ್ ಸಿನಾನ್ ಸುಟ್ಟ
Comments
Post a Comment